ನೂತನ ಕಾರ್ ಖರೀದಿಸುವರಿಗೆ ಸಸಿ ಉಡುಗೊರೆ

ನೂತನ ಕಾರ್ ಖರೀದಿಸುವರಿಗೆ ಸಸಿ ಉಡುಗೊರೆ

ನೂತನ ಕಾರ್ ಖರೀದಿಸುವರಿಗೆ ಸಸಿ ಉಡುಗೊರೆ ನೀಡಿ ಪರಿಸರ ಕಾಳಜಿ ಹೊಂದಿದ ನಾರಾಯಣ 
ಹ್ಯೂಂಡಾಯ್ ಹಾಗೂ ವಿಜಯಪುರ ರೆನಾಲ್ಟ್ ಶೋರೂಮ. 
ವಿಜಯಪುರ, ಮೇ.9 ನಗರದ ಹೊರವಲಯದಲ್ಲಿರುವ ನಾರಾಯಣ ಹ್ಯೂಂಡಾಯ್ ಶೋರೂಮ್‍ದಲ್ಲಿ ಇತ್ತೀಚಿಗೆ ನೂತನ ಕಾರ ಖರೀದಿಸುವ ಗ್ರಾಹಕರಿಗೆ ಉಡುಗೊರೆಯಾಗಿ ಸಸಿ ಹಾಗೂ ನೀರಿನ ಬಾಟಲ್ ನೀಡುವ ಮೂಲಕ ಪರಿಸರ ಕಾಳಜಿ ಮೆರಿಯುತ್ತಿದೆ.
ಈ ಸಂದರ್ಭದಲ್ಲಿ ನಾಯಾಯಣ ಹ್ಯೂಂಡಾಯ್ ಮಾಲೀಕರಾದ ಗೋವಿಂದ ಜ್ಯೋಶಿ ಮಾತನಾಡಿ, ಆಧುನಿಕ ದಿನಗಳಲ್ಲಿ ಮರಗಳು ಇತ್ತೀಚಿಗೆ ತುಂಬ ಕಡಿಮೆಯಾಗುತ್ತಿವೆ, ಇಂದಿನ ದಿನದಲ್ಲಿ ಹಸಿರು ವಾತಾವರಣವಿದ್ದರೆ ಮನುಷ್ಯನ ಆರೋಗ್ಯವೇ ಬದಲಾಗುತ್ತದೆ. ಗಿಡ ಮರಗಳಿದ್ದಲ್ಲಿ ನೈಸರ್ಗಿಕ ಗಾಳಿ ನಮಗೆ ದೊರೆಯುತ್ತದೆ. ನೀರಿಲ್ಲದೆ ಗಿಡ ಮರಗಳ ಭತ್ತಿ ಹೋಗುತ್ತಿವೆ. ಆದ್ದರಿಂದ ಮನೆಗೊಂದು ಸಸಿ ನೆಟ್ಟರೆ ಮಳೆಯ ಪ್ರಮಾಣ ಹೆಚ್ಚಾಗುವುದೆಂದು ಈ ಉದ್ದೇಶದ ಮೂಲಕ ನಮ್ಮ ಶೋರೂಮ್ ವತಿಯಿಂದ ಪರಿಸರ ಕಾಳಜಿಯಿಂದ ವಾಹನ ಖರೀದಿಸುವವರಿಗೆ ಸಣ್ಣ ಉಡುಗೊರೆಯಾಗಿ ಸಸಿ ನೀಡಲು ಮುಂದಾಗಿದ್ದೇವೆ. ಹಸಿರು ವಾತಾವರಣ ನಿರ್ಮಾಣಕ್ಕಾಗಿ ನಮ್ಮದೊಂದು ಸಣ್ಣ ಪ್ರಯತ್ನ ಎಂದು ಹೇಳಿದರು.
    ಸುಮಾರು ಗ್ರಾಹಕರಿಗೆ ಈ ಕೊಡುಗೆ ನೀಡಿದಾಗ ಮನ ಸಂತೋಷ ವ್ಯಕ್ತಪಡಿಸಿದರು.