ಯೋಗಿ ಆದಿತ್ಯನಾಥ್ ಆಯ್ಕೆ ಮಾಡಿದ್ದು  ಸರಿಯಲ್ಲ : ಖರ್ಗೆ

ಯೋಗಿ ಆದಿತ್ಯನಾಥ್ ಆಯ್ಕೆ ಮಾಡಿದ್ದು  ಸರಿಯಲ್ಲ : ಖರ್ಗೆ

ಯಾದಗಿರಿ  :  ಯೋಗಿ ಆದಿತ್ಯನಾಥ್'ರನ್ನು  ಆಯ್ಕೆ ಮಾಡಿದ್ದು  ಸರಿಯಲ್  ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು  ಕಾಂಗ್ರೆಸ್ ನಾಯಕ ಮಲ್ಲಕಾರ್ಜುನ ಖರ್ಗೆ ಹೇಳಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಬಿಜೆಪಿ ಪಕ್ಷದ  325 ಶಾಸಕರಲ್ಲಿ ಉತ್ತಮ ಸಮರ್ಥ ನಾಯಕರಿದ್ದರು ಪಕ್ಷವು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡದೆ ವಿವಾದಿತ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದ್ದು ದೇಶಕ್ಕೆ ಕೆಟ್ಟ ಸಂದೇಶ ನೀಡಿದಂತಾಗಿದೆ.

ಪ್ರಜಾಪ್ರಭುತ್ವದಲ್ಲಿ ಸಂವಿಧಾನಬದ್ದ ಮಾತನಾಡುವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕಿತ್ತು. ಆದರೆ ಸಮಾಜದಲ್ಲಿ ಶಾಂತಿ ಭಂಗ, ಜಗಳಗಂಟ ನಾಯಕನನ್ನು ಪಕ್ಷವು ಆಯ್ಕೆ ಮಾಡಿರುವುದು ಸರಿಯಲ್ಲ. ಇದು ದೇಶಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು  ಖರ್ಗೆ ಹೇಳಿದ್ದಾರೆ.