ಸುಡಾನ್, ಸಿರಿಯಾ, ಇರಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ರಾಷ್ಟ್ರಗಳ ಪ್ರಜೆಗಳ ನಿರ್ಬಂಧ

ಸುಡಾನ್, ಸಿರಿಯಾ, ಇರಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ರಾಷ್ಟ್ರಗಳ ಪ್ರಜೆಗಳ ನಿರ್ಬಂಧ

ವಾಷಿಂಗ್ಟನ್ : ಈ ಬಾರಿ ಮುಸ್ಲಿಂ ಪ್ರಾಬಲ್ಯವಿರುವ 6 ರಾಷ್ಟ್ರಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಲಸೆ ವಿರೋಧಿ ನೀತಿಗೆ ಸಹಿ ಹಾಕಿದ್ದು,   ಸುಡಾನ್, ಸಿರಿಯಾ, ಇರಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ರಾಷ್ಟ್ರಗಳ ಪ್ರಜೆಗಳಿಗೆ ಹೊಸ ವೀಸಾ ನೀಡುವುದಕ್ಕೆ ನಿರ್ಬಂಧ ಹೇರಲಾಗಿದ್ದು, ಅಂತೆಯೇ ಅಮೆರಿಕದ ನಿರಾಶ್ರಿತರ ಕಾರ್ಯಕ್ರಮವನ್ನೂ ಕೂಡ 120  ದಿನಗಳವರೆಗೆ ನಿಷೇಧಿಸಲಾಗಿದೆ. ಇದೇ ಮಾರ್ಚ್ 16ರಿಂದ ನೂತನ ವಲಸೆ ನೀತಿ ಜಾರಿಗೆ ಬರಲಿದ್ದು, ನೂತನ ನೀತಿಯ ಅನ್ವಯ ಸುಡಾನ್, ಸಿರಿಯಾ, ಇರಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ರಾಷ್ಟ್ರಗಳ ಪ್ರಜೆಗಳ  ವೀಸಾಗೆ ನಿರ್ಬಂಧ ಹೇರಲಾಗಿದೆ. ಇನ್ನು ಈ ಪಟ್ಟಿಯಿಂದ ಇರಾಕ್ ಗೆ ವಿನಾಯಿತಿ ನೀಡಲಾಗಿದೆ.ಇನ್ನು ಪ್ರಸ್ತುತ ಹೇರಲಾಗಿರುವ 90 ದಿನಗಳ ನಿಷೇಧವು ಈಗಾಗಲೇ ಅಧಿಕೃತ ವೀಸಾಗಳನ್ನು ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದೂ ಪರಿಷ್ಕೃತ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.