ನವಾಜ್ ಷರೀಫ್ ಎದುರು ಗಾಯತ್ರಿ ಮಂತ್ರ ಪಠಿಸಿದ ಬಾಲಕಿ

ನವಾಜ್ ಷರೀಫ್ ಎದುರು ಗಾಯತ್ರಿ ಮಂತ್ರ ಪಠಿಸಿದ ಬಾಲಕಿ

ಕರಾಚಿ  ಕರಾಚಿಯಲ್ಲಿ ಹಿಂದೂಗಳು ಹಮ್ಮಿಕೊಂಡಿದ್ದ ಹೋಲಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಬಾಲಕಿಯೋರ್ವಳು ಗಾಯತ್ರಿ ಮಂತ್ರ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಹೋಲಿ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಎದುರು ನರೋದಾ ಮಾಲ್ನಿ ಎಂಬಾಕೆ ಗಾಯತ್ರಿ ಮಂತ್ರ ಪಠಿಸಿದ್ದಾಳೆ, ಗಾಯತ್ರಿ ಮಂತ್ರ ಹಾಡುವ ಮೂಲಕ ನರೋದಾ ನೆರದಿದ್ದ ಜನ ಸಮೂಹವನ್ನು ಮಂತ್ರ ಮುಗ್ದವನ್ನಾಗಿಸಿದ್ದಾಳೆ.ಇದೇ ವೇಳೆ ಮಾತನಾಡಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಅಲ್ಪಸಂಖ್ಯಾತ ವರ್ಗಗಳ ಹಿತಾಸಕ್ತಿ ಕಾಪಾಡಲು ತಮ್ಮ ಸರ್ಕಾರ ಬದ್ದವಾಗಿರುವುದಾಗಿ ಹೇಳಿದ್ದಾರೆ.