ದಿ.11ರಂದು  ಬೇವೂರಿನಲ್ಲಿ ಗ್ಯಾನಪ್ಪಜ್ಜನವರ ಕಾರ್ತಿಕೋತ್ಸವ 

ದಿ.11ರಂದು  ಬೇವೂರಿನಲ್ಲಿ ಗ್ಯಾನಪ್ಪಜ್ಜನವರ ಕಾರ್ತಿಕೋತ್ಸವ 

 ಬಾಗಲಕೋಟ,ಡಿ.9; ತಾಲೂಕಿನ ಸುಕ್ಷೇತ್ರ ಬೇವೂರ ಗ್ರಾಮದಲ್ಲಿ ನಡೆದಾಡುವ ದೇವರು ಮಳೆ ಬೆಳೆ ಪವಾಡ ಪುರುಷರು, ಗ್ರಾಮದ ಆರಾಧ್ಯ ದೇವರು  ಶ್ರೀ ಗ್ಯಾನಪ್ಪಜ್ಜನವರ ಕಾರ್ತಿಕೋತ್ಸವ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಡಿ.11 ಸೋಮವಾರದಂದು ಗ್ರಾಮ ಶ್ರೀ ಗ್ಯಾನೇಶ್ವರ ದೇವಸ್ಥಾನದ ಆವರಣದಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹ ಸಮಾರಂಭ ಪರಮ ಪೂಜ್ಯ ಗ್ಯಾನಪ್ಪಜ್ಜನವರ ನೇತೃತ್ವದಲ್ಲಿ ಜರುಗಲಿವೆ.
ಸಮಾರಂಭದ ಸಾನ್ನಿದ್ಯವನ್ನು ಷ.ಬ್ರ. ಶ್ರೀ ರುದ್ರಮುನಿ ಶಿವಾಚಾರ್ಯರು ನಿಡಗುಂದಿ, ಕಮತಗಿ ಕೋಟೆಕಲ್ ಮಠದ ಶ್ರೀ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳು, ಗುಳೇದಗುಡ್ಡದ ಮರಡಿಮಠದ ಷ.ಬ್ರ.ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ, ಬಿಲ್‍ಕೆರೂರಿನ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸಂಗನಬಸವ ಮಹಾಸ್ವಾಮಿಗಳು, ಶಾಂತಲಿಂಗ ಮಹಾಸ್ವಾಮಿಗಳು, ಗುರುಮೂರ್ತಿ ಶಿವಾಚಾರ್ಯರು ವಹಿಸಲಿದ್ದಾರೆ.
ಉದ್ಗಾಟಕರಾಗಿ ಶಾಸಕರಾದ ಹೆಚ್.ವಾಯ್.ಮೇಟಿ ಆಗಮಿಸುವರು. ಅಧ್ಯಕ್ಷತೆಯನ್ನು ಮಾಜಿ ಗ್ರಾ.ಪಂ.ಅಧ್ಯಕ್ಷ ಜಿ.ವಾಯ್.ಹೆರಕಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಶೇಖಣ್ಣ ಹೆರಕಲ್ ಸೇರಿದಂತೆ ಮತ್ತಿತರರು ಆಗಮಿಸಲಿದ್ದಾರೆ.
ಶ್ರೀ ಗ್ಯಾನಪ್ಪಜ್ಜನವರ ಭಾವಚಿತ್ರವಿರುವ ಕ್ಯಾಲೆಂಡರ್-2018 ಮಾಜಿ ಶಾಸಕ ವೀರಣ್ಣ ಚರಂತಿಮಠ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಜಿ.ಪಂ.ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಜಿ.ಪಂ.ಸದಸ್ಯೆ ಶ್ರೀಮತಿ ಕವಿತಾ ಲ.ದಡ್ಡಿ, ತಾ.ಪಂ.ಅಧ್ಯಕ್ಷ ಚನ್ನನಗೌಡ ಆರ್.ಪರನಗೌಡರ, ತಾ.ಪಂ.ಸದಸ್ಯ ನಿಂಗಪ್ಪ ಮಾಗನೂರ, ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸಕ್ಕುಬಾಯಿ ಶಿವಪ್ಪ ಹಿರೇಕುರಬರ, ನ್ಯಾಯವಾದಿ ಜಿ.ಜಿ.ಮಾಗನೂರ, ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಎಂ. ಸಜ್ಜನ, ಮಾಜಿ ತಾ.ಪಂ.ಸದಸ್ಯ ಎಸ್.ಎಂ.ಹರಗಬಲ್ಲ, ಡಿ.ವೈ.ಎಸ್‍ಪಿ ರವೀಂದ್ರ ಶಿರೂರ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಿ.10ರಂದು ರವಿವಾರ ರಾತ್ರಿ 10-00 ಗಂಟೆಗೆ ಭಜನಾ ಕಾರ್ಯಕ್ರಮ ಜರುಗಲಿವೆ. ಕಾರ್ಯಕ್ರಮಕ್ಕೆ ತನು-ಮನ ಧನ ನೀಡಿದ ಗಣ್ಯ ಮಾನ್ಯರಿಗೆ ಸನ್ಮಾನಿಸಲಾಗುವುದು. ಮತ್ತು ಸಾಂಸ್ಕøತಿಕ ಕಾರ್ಯಕ್ರ ಮವು ನಡೆಯಲಿವೆ. ಕಾರಣ ಬೇವೂರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಪರಮ ಪೂಜ್ಯ ಗ್ಯಾನಪ್ಪಜ್ಜನವರ ಕೃಪೆಗೆ ಪಾತ್ರರಾಗಬೇಕು ಎಂದು ಕಾರ್ಯಕ್ರಮದ ಸಂಯೋಜಕ ಬಸವರಾಜ  ಮಸಬಿನಾಳ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.