ಭಾರತೀಯನನ್ನು ಕೊಂದ ಅಮೆರಿಕ ಪ್ರಜೆ

ಭಾರತೀಯನನ್ನು ಕೊಂದ ಅಮೆರಿಕ ಪ್ರಜೆ

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಭಾರತೀಯರು ಆತಂಕದಲ್ಲಿದ್ದಾರೆ. ಈ ಬೆನ್ನಲ್ಲೇ ಜನಾಂಗೀಯ ನಿಂದನೆ ಜಗಳವಾಗಿ ಕನ್ಸಾಸ್‌ನ ಬಾರ್‌ವೊಂದರಲ್ಲಿ ಭಾರತೀಯನ ಮೇಲೆ ಅಮೆರಿಕದ ಪ್ರಜೆಯೊಬ್ಬ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಹೈದರಾಬಾದ್ ಮೂಲದ ಶ್ರೀನಿವಾಸ್ ಕುಚಿಭೋಟ್ಲಾ (32) ಮೃತ ದುರ್ದೈವಿ. ಇವರೊಂದಿಗೆ ಇದ್ದ ಇನ್ನಿಬ್ಬರು ಎಂಜಿನೀಯರ್‌ಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. bಒಲಾಥೆಯ ಗಾರ್ಮಿನ್ ಪ್ರಧಾನ ಕಚೇರಿಯಲ್ಲಿ ಕರ್ಯಾನಿರ್ವಹಿಸುತ್ತಿದ್ದ ಶ್ರೀನಿವಾಸ್ ಮತ್ತು ಅವರ ಸಹೋದ್ಯೋಗಿಗಳಾದ ಅಲೋಕ್ ಮದಸಾನಿ ಮತ್ತು ಇಯಾನ್ ಗ್ರಿಲ್ಲೋಟ್ ಬಾರ್‌ವೊಂದಕ್ಕೆ ತೆರಳಿದ್ದರು. ಅಲ್ಲಿ ಈ ಘಟನೆ ನಡೆದಿದ್ದು, ಅಮೆರಿಕದ ಪ್ರಜೆಯೊಬ್ಬ ಈ ಮೂವರ ಮೇಲೆ ಗುಂಡು ಹಾರಿಸಿದ್ದಾನೆ.  ಆರೋಪಿಯನ್ನು ಅಡಮ್ ಪುರಿಟ್ನ್ (51) ಎಂದು ಗುರುತಿಸಿದ್ದು, ಈಗಾಗಲೇ ಈತನನ್ನುಬಂಧಿಸಲಾಗಿದೆ. 'ನನ್ನ ದೇಶದಿಂದ ಹೊರ ಹೋಗು' ಎಂದು ಕೂಗುತ್ತಲೇ ಆರೋಪಿ, ಮೂವರ ಮೇಲೆ ಗುಂಡು ಹಾರಿಸಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.