ವಿದೇಶದಲ್ಲಿದ್ದ ಭಾರತೀಯರು ಮಾ.31, 2017 ಹಣ ಬದಲಾವಣೆ ಮಾಡಿಕೊಳ್ಳಬೇಕು. ಆರ್.ಬಿ.ಐ

ವಿದೇಶದಲ್ಲಿದ್ದ ಭಾರತೀಯರು ಮಾ.31, 2017 ಹಣ ಬದಲಾವಣೆ ಮಾಡಿಕೊಳ್ಳಬೇಕು. ಆರ್.ಬಿ.ಐ

ನವದೆಹಲಿ: ಅನಿವಾಸಿ ಭಾರತೀಯರು ಹಾಗೂ ನ.9 ರಿಂದ ಡಿ.30 ರ ವರೆಗೆ ವಿದೇಶಗಳಲ್ಲಿದ್ದ ಭಾರತೀಯರಿಗೆ ತಮ್ಮ ಬಳಿ ಇರುವ ಹಳೆಯ 500 1000 ರೂ ನೋಟುಗಳನ್ನು ಹೊಸ 500, 2000 ರೂ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವುದಕ್ಕೆ ಸೌಲಭ್ಯವನ್ನು ಜಾರಿಗೆ ತರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹೇಳಿದೆ.

ಆರ್ ಬಿಐ ನ ಅಧಿಸೂಚನೆ ಪ್ರಕಾರ ನ.9 ರಿಂದ ಡಿ.30 ರ ವರೆಗೆ ವಿದೇಶದಲ್ಲಿದ್ದ ಭಾರತೀಯರು ಮಾ.31, 2017 ರ ವರೆಗೆ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಇನ್ನು ಅನಿವಾಸಿ ಭಾರತೀಯರು(ಎನ್ಆರ್ ಐ) ಗಳಿಗೆ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವುದಕ್ಕೆ ಜೂ.30 ವರೆಗೆ ಕಾಲಾವಕಾಶ ವಿರುತ್ತದೆ.

ನ.9 ರಿಂದ ಡಿ.30 ವರೆಗೆ ವಿದೇಶದಲ್ಲಿದ್ದ ಭಾರತೀಯರಿಗೆ ನೋಟು ಬದಲಾವಣೆ ಮಾಡಿಕೊಳ್ಳಲು ಯಾವುದೇ ಮಿತಿ ವಿಧಿಸಲಾಗಿಲ್ಲ. ಆದರೆ ಅನಿವಾಸಿ ಭಾರತೀಯರಿಗೆ ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆಯಲ್ಲಿ ವಿಧಿಸಲಾಗಿರುವ ಮಿತಿ ಅನ್ವಯವಾಗಲಿದ್ದು, ಇಂತಿಷ್ಟೇ ರೂಪಾಯಿಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂಬ ನಿಯಮ ಇರಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. 

ಜ.2 ರಿಂದ ವಿಶೇಷ ಸೌಲಭ್ಯ ಜಾರಿಗೆ ಬರಲಿದೆ, ನೇಪಾಳ, ಭೂತಾನ್, ಪಾಕಿಸ್ತಾನ ಬಾಂಗ್ಲಾದಲ್ಲಿರುವ ಭಾರತೀಯರಿಗೆ ಈ ವಿಶೇಷ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ಆರ್ ಬಿಐ ಪ್ರಕಟಿಸಿದೆ.