ಕತಾರ್‌ನಲ್ಲಿ 61ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

ಕತಾರ್‌ನಲ್ಲಿ 61ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

ಕತಾರ್‌: ಇಲ್ಲಿನ ಕನ್ನಡ ಸಂಘದ ಆಶ್ರಯದಲ್ಲಿ 61ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರದಿಂದ ಆಚರಿಸಲಾಯಿತು. ಈ ಸಮಾರಂಭದಲ್ಲಿ ಡಾ. ದೊಡ್ಡರಂಗೇಗೌಡರು,ಡಾ. ಪುತ್ತುರಾಯರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದು, ಪೂರ್ಣಕುಂಭಗಳೊಂದಿಗೆ ಸುಮಂಗಲಿಯರು ಸ್ವಾಗತಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಕತಾರ್‌ ಕನ್ನಡ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಅಲ್ಲಿನ ಕನ್ನಡಿಗರು ಸಂಭ್ರಮಿಸಿದರು. ಡಾ. ದೊಡ್ಡರಂಗೇಗೌಡರಿಗೆ 'ಕತಾರ್ ಕನ್ನಡ ಸಮ್ಮಾನ್' ಗೌರವ ಪ್ರದಾನ ಮಾಡಿ ಗೌರವಿಸಲಾಯಿತು. ಈಜಿಪ್ಟಿನಲ್ಲಿ ಕಂಡ 'ಊರಲ್ಲಿ' ಎಂಬ ಕನ್ನಡ ಲಿಪಿಯನ್ನು ಉಲ್ಲೇಖಿಸಿ, ಈ ಬಗ್ಗೆ ಕರ್ನಾಟಕ ಸರಕಾರಕ್ಕೆ ಬರೆದು ತಿಳಿಸಿದ ಬಳಿಕ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ-ಮಾನ ನೀಡಲಾಯಿತು ಎಂದು ಸಮಾರಂಭದಲ್ಲಿ ಮಾತನಾಡಿದ ದೊಡ್ಡರಂಗೇಗೌಡ ಹೇಳಿದರು.  ಶಿವರಾಜ್ ಕುಮಾರ್‌ ಅವರಿಗೆ 'ರಾಜಕಲಾರತ್ನ' ಎಂಬ ಪ್ರಶಸ್ತಿ ನೀಡಿದ ಬಳಿಕ ಗೀತಾ ಶಿವರಾಜ್ ಕುಮಾರ್ ಅವರನ್ನೂ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಕೆ. ಮಧು ಅವರು ರಚಿಸಿರುವ, ಅಶ್ವಿನ್ ಸಂಗೀತ ಸಂಯೋಜಿಸಿರುವ ರಾಜೇಶ್ ಕೃಷ್ಣನ್ ಹಾಗು ಮಾನಸ ಹೊಳ್ಳ ಧ್ವನಿ ನೀಡಿರುವ ಗೀತೆಗೆ ಸ್ಥಳೀಯ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಿತು.  ಕತಾರ್‌ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ನೃತ್ಯ ಪ್ರದರ್ಶನ  ತುಳು ಕೂಟ, ಬಂಟ್ಸ್ ಕತಾರ್, ಎಂ.ಸಿ.ಸಿ ಸದಸ್ಯರು ಶಿವರಾಜಕುಮಾರ್ ನಟಿಸಿದ ಚಲನಚಿತ್ರಗಳ ಹಾಡುಗಳನ್ನಾಧರಿಸಿದ ನೃತ್ಯಗಳನ್ನು ಪ್ರದರ್ಶಿಸಿದರು.  ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಣ್ಣ ಬಣ್ಣದ ಕಲಾಕೃತಿಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಗಿತ್ತು. ವೃದ್ಧಾಪ್ಯದಲ್ಲಿ ತಂದೆ, ತಾಯಿಗಳನ್ನು ಅನಾಥರನ್ನಾಗಿಸಬಾರದೆಂಬ ಅರ್ಥ ಪೂರ್ಣ ನಾಟಕ ಪ್ರದರ್ಶಿಸಲಾಯಿತು. ಸಂಜೆ ವೇಳೆಗೆ ನಟ ಶಿವರಾಜ್ ಕುಮಾರ್, ಚಿ. ಉದಯಶಂಕರ ಅವರ ಪುತ್ರ ಚಿ. ಗುರುದತ್ತರು ಆಗಮಿಸಿದ್ದರು. ಶಿವರಾಜ್‌ ಕುಮಾರ್‌ ಅವರೇ ವೇದಿಕೆಗೆ ಬಂದು ಕುಣಿದು ಮನ ರಂಜಿಸಿದರು.

ಚಿಕ್ಕಮಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕೆ.ಎಂ.ಸಿ.ಎ. ಅಧ್ಯಕ್ಷ ನಿಯಾಜ಼್ ಅಹ್ಮದ್, ಆರ್ಯಭಟ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದೀಪಕ್ ಶೆಟ್ಟಿ, ಸಂಗೀತ ಸಂಯೋಜಕರಾದ ಅಶ್ವಿನ್‌ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕತಾರ್‌ನಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ನಾಡಧ್ವಜ ಹಾರಿಸಿ ನಾಡಗೀತೆ ಹಾಡಿದ ಸಂಭ್ರಮ. Vಕರ್ನಾಟಕ ಸಂಘ ಕತಾರಿನ ರಾಜ್ಯೋತ್ಸವದ ವಾರ್ಷಿಕ ವಿಶೇಷ ಸಂಚಿಕೆಯಾದ 'ಶ್ರೀಗಂಧ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 'ನಮ್ ರೇಡಿಯೋ' ಖ್ಯಾತಿಯ ರೂಪಾ ಗುರುರಾಜ್ ಅವರ ವಾದ್ಯ ತಂಡದಿಂದ ಸಂಗೀತ ಕಾರ್ಯಕ್ರಮ, ಚೆನ್ನಪ್ಪ ಹುದ್ದಾರ್‌ ಅವರಿಂದ ಬಬ್ರುವಾಹನ ಚಲನಚಿತ್ರದಲ್ಲಿನ ಅಣ್ಣಾವ್ರ ನಟನೆ ಪ್ರದರ್ಶನಗೊಂಡಿತು.