ಮದ್ರಸಾಗಳಲ್ಲಿ 1 ಲಕ್ಷ ಶೌಚಾಲಯ ನಿರ್ಮಾಣ

ಮದ್ರಸಾಗಳಲ್ಲಿ 1 ಲಕ್ಷ ಶೌಚಾಲಯ ನಿರ್ಮಾಣ

ನವದೆಹಲಿ   : ದೇಶದಾದ್ಯಂತ ಇರುವ ಸಾಂಪ್ರದಾಯಿಕ ಕಲಿಕಾ ಕೇಂದ್ರಗಳಾದ ಮದ್ರಸಾಗಳಲ್ಲಿ 1 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಈ ಬಗ್ಗೆ ಶನಿವಾರ ಮಾಹಿತಿ ನೀಡಿದ ನಖ್ವಿ ಅವರು, ಸ್ವಚ್ಛ ಭಾರತ ಅಭಿಯಾನದಡಿ ಮುಂದಿನ ಆರ್ಥಿಕ ವರ್ಷದ ಅಂತ್ಯದೊಳಗೆ ಶೌಚಾಲಯಗಳ ಜತೆಗೆ ಸಾಂಪ್ರದಾಯಿಕ ಕಲಿಕಾ ಕೇಂದ್ರಗಳಲ್ಲಿ ಮಧ್ಯಾಹ್ನ ಬಿಸಿಯೂಟ, ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು. ದೇಶಾದ್ಯಂತ ಮದ್ರಸಾಗಳಲ್ಲಿ '3ಟಿ' (ಟಿ-ಟೀಚ​ರ್ಸ್, ಟಿಫನ್, ಟಾಯ್ಲೆಟ್) ಫಾರ್ಮಲಾ ಅನುಷ್ಠಾನ ಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.