ಮಲ್ಲಾಪೂರ ಘಟಕದ ನೇಕಾರ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ

ಮಲ್ಲಾಪೂರ ಘಟಕದ ನೇಕಾರ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ

ಬಾಗಲಕೋಟ,ಜ.1 : ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ನೇಕಾರ ಸಮಾಜದ ಭವನದಲ್ಲಿ ದಿನಾಂಕ : 31-12-2017 ರವಿವಾರ ದಿವಸ ಸಾಯಂಕಾಲದಲ್ಲಿ ನಡೆದ ನೇಕಾರ ರಕ್ಷಣಾ ವೇದಿಕೆಯ ಮಲ್ಲಾಪೂರ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಅಧ್ಯಕ್ಷರನ್ನಾಗಿ ಮಂತ್ರಪ್ಪ ಎಸ್. ರಾಜನಾಳ, ಉಪಾಧ್ಯಕ್ಷರನ್ನಾಗಿ ಶಿವಾನಂದ ಡಿ. ರಾಜನಾಳ, ಅಂದಾನೆಪ್ಪ ಬಿ. ಕಾಡೇಶನವರ, ಕಾರ್ಯದರ್ಶಿಯಾಗಿ ಮಹಾಂತೇಶ ಮ. ಕಾಡೇಶನವರ ನೇಕಾರ ಬಂಧುಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಸಭೆಯಲ್ಲಿ ನೇಕಾರ ಮುಖಂಡರಾದ ಚಂದ್ರಕಾಂತ ಶೇಖಾ, ಜಿಲ್ಲಾ ಅಧ್ಯಕ್ಷರಾದ ಕಿರಣ ಬಸುಘಟ್ಟದ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಹುಲ್ಯಾಳ, ಜಿಲ್ಲಾ ಉಪಾಧ್ಯಕ್ಷರಾ ರವಿ ರಾಜನಾಳ, ಜಿಲ್ಲಾ ಖಜಾಂಚಿಗಳಾದ ನಾರಾಯಣ ಕಂಠಿ ಗೌಡ್ರ, ಗ್ರಾಮದ ನೇಕಾರ ಹಿರಿಯರಾದ ಶಿವಲಿಂಗಪ್ಪ ರಾಜನಾಳ, ಶಿವಪ್ಪ ರಾಜನಾಳ, ಬಸಪ್ಪ ಕಂದಗಲ್ಲ, ಮಲ್ಲಪ್ಪ ಹಳ್ಳೂರ, ಶಿವಪುತ್ರಪ್ಪ ರಾಜನಾಳ, ಹಾವಪ್ಪ ರಾಜನಾಳ, ಆನಂದಪ್ಪ ಕಂದಗಲ್ಲ ಹಾಗೂ ಯುವಕರು ಹಾಜರಿದ್ದರು.