ಕರ್ನಾಟಕ ರಾಜ್ಯ ವಿಕಲಚೇತನರ ಗೌವಧನ ಹೆಚ್ಚಳ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ

 ಕರ್ನಾಟಕ ರಾಜ್ಯ ವಿಕಲಚೇತನರ ಗೌವಧನ ಹೆಚ್ಚಳ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ

ವಿಜಯಪುರ ಸೆ,05: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ 24-26ನೇ ವರದಿಯ ಶಿಪಾರಸ್ಸು ಯತಾವತ್ತಾಗಿ ಜಾರಿಗೊಳಿಸಿ ತಾಲೂಕಾ ಪುನರ್‍ವಸತಿ ಕಾರ್ಯಕರ್ತರು ಮತ್ತು ಗ್ರಾಮೀಣ ಪುನರ್‍ವಸತಿ ಕಾರ್ಯಕ್ರಮ ಗೌವಧನ ಹೆಚ್ಚಳ ಮಾಡಿ ಹುದ್ದೆಯನ್ನು ಖಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ಧೇಶ (ಎಂಆರ್.ಡಬ್ಲ್ಯೂ) ಮತ್ತು ಗ್ರಾಮೀಣ ಪುನರ್ವಸತಿ (ವ್ಹಿ.ಆರ್.ಡಬ್ಲ್ಯೂ) ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ಒತ್ತಾಯಿಸಿ ನಗರದ ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಗೆ ಪ್ರತಿಭಟನೆಯ ಮೂಲಕ ತೆರಳಿ ಅಪರ ಜಿಲ್ಲಾಧಿಕಾರಿಗಳಾದ ಎಚ್.ಬೂದೆಪ್ಪ ಅವರ ಮೂಲಕ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್.ಕೆ. ಘಾಟೆ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಸಮಿತಿಯು 24-26 ನೇ ವರದಿಯನ್ನು ಶಿಫಾರಸ್ಸು ಮಾಡಿ ಎಂ.ಆರ್.ಡಬ್ಲ್ಯೂ ಮತ್ತು ವ್ಹಿ.ಆರ್.ಡಬ್ಲ್ಯೂ ಕಾರ್ಯಕರ್ತರ ಗೌರವಧನ ಹೆಚ್ಚಳ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಕೈಗೊಂಡು ಹಿನ್ನೆಲೆಯಲ್ಲಿ ವಿಕಲಚೇತನರ ನಿರ್ದೇಶನಾಲಯವು ಎಂ.ಆರ್.ಡಬ್ಲ್ಯೂ ಮತ್ತು ವ್ಹಿ, ಆರ್. ಡಬ್ಲ್ಯೂ ಕಾರ್ಯಕರ್ತರಿಗೆ ಮಾಸಿಕ ಗೌರವಧನ ಕ್ರಮವಾಗಿ 5000ಹಾಗೂ 100000 ರೂಗಳಿಗೆ ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ದಿನಾಂಕ 29-09-2014 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ವರದಿಯ ಅನುಷ್ಠನಕ್ಕೆ ಆದ್ಯತೆ ನೀಡದೆ ಕಡೆಗಣಿಸಿದೆ. 2017-18ನೇ ಸಾಲಿನ ಅಯ್ಯವ್ಯಯ ಬಜೆಟ್‍ನಲ್ಲಿ ಸರಕಾರ ಎಮ.ಆರ್.ಡಬ್ಲ್ಯೂ ಕಾರ್ಯಕರ್ತರಿಗೆ ಮಾಸಿ ಗೌರವಧನ ರೂ. 3000/- ಗಳಿಗೆ ಆದೇಶಿಸಿದೆ. 
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯನ್ನು ಸರಕಾರವೇ ರಚಿಸಿದ್ದು, ಸಮಿತಿ ನೀಡಿದ ಶಿಪಾರಸ್ಸು ವರದಿಯನ್ನು ಸರಕಾರ ಕಡೆಗಣಿಸಿದೆ “ ಸಮಿತಿ ಹೇಳಿದ್ದು ಮಾರುದ್ದ ಸರಕಾರ ನೀಡಿದ್ದು ಗೇಣುದ್ಧ” ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ವಂಚಿಸುತ್ತಿರುವುದು ದುರಂತವೆ ಸರಿ ಆದರಿಂದ 24-26ನೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ವರದಿಯ ಅನುಷ್ಠನವನ್ನು ಸರಕಾರ ಯತವತ್ತಾಗಿ  ಘೊಷಣೆ ಮಾಡಿ ಸದರಿ ಎಂ.ಆರ್. ಡಬ್ಲ್ಯೂ ಮತ್ತು ವ್ಹಿ.ಆರ್. ಡಬ್ಲ್ಯೂ ಕಾರ್ಯಕರ್ತರ ಹುದ್ದೆಯನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಸಮಿತಿ ಸದಸ್ಯರಾದ ಪರುಶುರಾಮ ಗುನ್ನಾಪುರ ಮಾತನಾಡಿ, ನುಡಿದಂತೆ ನಡೆಯುವ ಸರ್ಕಾರ ಅಂಗವಿಕಲರ ನೀಡಿದ ಪ್ರಣಾಳಿಕೆ ಭರವಸೆಗಳನ್ನು ಗಾಳಿಗೆ ತೂರಿದ್ದಾರೆ. ಎಂ.ಆರ್.ಡಬ್ಲ್ಯೂ ಮತ್ತು ವ್ಹಿ.ಆರ್. ಡಬ್ಲ್ಯೂ ಗೌರವಧನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ 24-26ನೇ ವರದಿಯನ್ನು ಶಿಪಾರಸ್ಸಿನಂತೆ ಯತ್ತಾವತ್ತಾಗಿ ಗೌರವಧನ ಹೆಚ್ಚಳ ಮಾಡಬೇಕು. ಎಂ.ಆರ್.ಡಬ್ಲ್ಯೂ ಮತ್ತು ವ್ಹಿ.ಆರ್. ಡಬ್ಲ್ಯೂಗಳ ಕಾರ್ಯಕರ್ತರಿಗೆ ಇಲಾಖೆಯಿಂದ ನೀಡುತ್ತಿರುವ ಯಂತ್ರಚಾಲಿತ ಯೋಜನೆಯಡಿ ಸದರಿ ಕಾರ್ಯಕರ್ತರಿಗೆ ಶೇ75 ರಷ್ಟು ಪ್ರಮಾಣ ಷರತ್ತು ಸಡಿಸಲಿ ಮತ್ತು ಮೊದಲ ಆದ್ಯತೆ ಮೇರೆ ಯಂತ್ರಚಾಲಿತ ವಾಹನ ನೀಡಬೇಕು. ಇಂದಿನ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನ ಯುಗದಲ್ಲಿ ಕೆಲಸ ನಿರ್ವಹಿಸಲು ಇಲಾಖೆ ಮತ್ತು ವಿವಿಧ ಇಲಾಖೆಗಳಿಗೆ ಪತ್ರ ವ್ಯವಹಾರ ಮಾಡಲು ಎಂ.ಆರ್. ಡಬ್ಲ್ಯೂ ಮತ್ತು ವ್ಹಿ.ಆರ್. ಡಬ್ಲ್ಯೂಗಳಿಗೆ ಲ್ಯಾಪಟಾಪ್ ಹಾಗೂ ಉಚಿತ ಕರೆ ಸಂಕರ್ಪಕದೊಂದಿಗೆ ಮೊಬೈಲ್ ಸಿಮ್‍ಕಾರ್ಡ್ ಒದಗಿಸಬೇಕು. ಆಧಾರ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ 11500 ರೂ ಮತ್ತು ನಗರ ಪ್ರದೇಶಕ್ಕೆ 24000 ರೂಗಳ ಆಧಾಯ ಮಿತಿಯನ್ನು ತಿದ್ದುಪಡಿ ಮಾಡಿ ಆಧಾಯವನ್ನು 2 ಲಕ್ಷದವರೆಗೆ ಹೆಚ್ಚಳ ಮಾಡಿ ಹಾಗೂ ಯೋಜನೆ ಅಡಿ ಸಾಲವನ್ನು 1 ಲಕ್ಷದವರೆಗೂ ಸಹಾಯಧನ ನೀಡಬೇಕು. ಎಂ.ಆರ್. ಡಬ್ಲ್ಯೂ ಮತ್ತು ವ್ಹಿ.ಆರ್.ಡಬ್ಲ್ಯೂ ಕಾರ್ಯಕರ್ತರು ಆಕಸ್ಮಿಕವಾಗಿ ಮರಣ ಹೊಂದಿದರೆ ಕುಟುಂಬಕ್ಕೆ 5 ಲಕ್ಷ ರೂಗಳು ಪರಿಹಾರ ಘೋಷಣೆ ಮಾಡಬೇಕು ಆ ಕುಟುಂಬದ ಪಾಲನೆಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಮುತ್ತುರಾಜ ಸಾತಿಹಾಳ, ರವಿ ರಾಠೋಡ, ಪರಶುರಾಮ ಭೋಸಲೇ, ಬಾಳು ಗಾಯಕವಾಡ, ಸುರೇಶ ಚವ್ಹಾಣ, ರಾಜು ಭುಯ್ಯಾಂರ, ಎಂ.ಬಿ. ಮುಲ್ಲಾ, ಬಾಳಪ್ಪ ಗಾಯಕವಾಡ, ರಾಜು ಕುಮುಟಗಿ,  ಮನೋಜ ಶಿರೋಳ, ಬಿ.ಎಸ್.ನಾಯ್ಕೋಡಿ, ಗಂಗಾಧರ ಸಿ. ಬಿ.ಎಸ್. ಸೊನ್ನ, ಮಲ್ಲಪ್ಪ ಗೋ ಕರ್ನಾಳ, ಪೀರಮಹ್ಮದ, ಗುರು ಗಂಗನಳ್ಳಿ, ಬೀರಪ್ಪ ರೆಬಿನಾಳ ಮುಂತಾದವರು ಇದ್ದರು.