ಸೆ.17 ರಂದು ಮಾಧ್ಯಮ ಪ್ರತಿನಿಧಿಗಳಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರ 

ಸೆ.17 ರಂದು ಮಾಧ್ಯಮ ಪ್ರತಿನಿಧಿಗಳಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರ 

ವಿಜಯಪುರ,ಸೆ.11: ನವದೆಹಲಿಯ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಮತ್ತು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 17 ರಂದು ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗಾಗಿ ‘ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಪತ್ರಿಕೋದ್ಯಮದ ಸಾಧ್ಯತೆಗಳು’ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಸಮೂಹ ಮಾಧ್ಯಮಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕಾನೂನು ಮತ್ತು ಮಹಿಳೆಯರ ಹಕ್ಕುಗಳ ವಿಷಯಗಳಿಗೆ ಅಷ್ಟಾಗಿ ಆದ್ಯತೆ ಸಿಗುತ್ತಿಲ್ಲ. ಅಷ್ಟೇ ಅಲ್ಲ ಹೆಚ್ಚಿನ ಸ್ಥಳಾವಕಾಶ ಕೂಡಾ ದೊರೆಯುತ್ತಿಲ್ಲ. ಮಹಿಳಾ  ದಿನಾಚರಣೆಯ ಸಂದರ್ಭದಲ್ಲಿಯೋ ಅಥವಾ ಸಭೆ ಸಮಾರಂಭಗಳ ವರದಿಗೆ ಮಾತ್ರ ಸೀಮಿತವಾಗಿವೆ. ಮಹಿಳಾ ಕಾನೂನು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪರಿಚಯ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದ ಸಾಧ್ಯತೆಗಳ ಕುರಿತು ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮ ಮತ್ತು ಸಮೂಹ  ಸಂವಹನ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 
ಈ ಕಾರ್ಯಾಗಾರದಲ್ಲಿ ನಾಡಿನ ಖ್ಯಾತ ಅಭಿವೃದ್ಧಿ ಪತ್ರಕರ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದ  ತಜ್ಞರು, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಗ್ರಾಮೀಣಾಭಿವೃದ್ಧಿ ವರದಿಗಾರಿಕೆ ಕುರಿತು ಉಪನ್ಯಾಸ, ಚರ್ಚೆ, ಸಂವಾದ ನಡೆಸಿಕೊಡಲಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದ ವರದಿ ಮಾಡುವ ಪತ್ರಕರ್ತರಿಗೆ ಈ ಕಾರ್ಯಾಗಾರ ಹೆಚ್ಚು ಉಪಯುಕ್ತವಾಗಿದೆ.  ಈ ಕಾರ್ಯಾಗಾರದಲ್ಲಿ ರಾಜ್ಯ ಹಾಗೂ ಸ್ಥಳೀಯ ಹಾಗೂ ವಿಭಾಗ ಮಟ್ಟದ ದಿನಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳಲ್ಲಿ ವರದಿಗಾರರಾಗಿ/ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಭಾಗವಹಿಸಬಹುದಾಗಿದೆ. 
ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರು, ಹುದ್ದೆ, ಮಾಧ್ಯಮ ಸಂಸ್ಥೆಯ ಹೆಸರು, ಸಂಪೂರ್ಣ ವಿಳಾಸ, ಈ-ಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಈ ವಿಳಾಸಕ್ಕೆ ಪತ್ರ ಮುಖೇನ ಇಲ್ಲವೇ ಮೊಬೈಲ್ ಅಥವಾ ಈಮೇಲ್ ಮೂಲಕ ಸೆಪ್ಟೆಂಬರ್ 14ರೊಳಗೆ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಸರು ನೋಂದಾಯಿಸಿಕೊಂಡ ನಂತರ ಆಯ್ಕೆಯಾದವರಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ನೋಂದಣಿಗಾಗಿ ಸಂಪರ್ಕಿಸಿ: ಪ್ರೊ.ಓಂಕಾರ ಕಾಕಡೆ, ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ- 586108; ಈಮೇಲ್: oಟಿಞಚಿಡಿಞಚಿಞಚಿಜe@gmಚಿiಟ.ಛಿom ; ಮೊಬೈಲ್/ವಾಟ್ಸಪ್: ತಹಮೀನಾ ಕೋಲಾರ 9482248372/8310693767 ಮತ್ತು ದೂರವಾಣಿ: 08352-229010.