ನಾಳೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಾಗಲಕೋಟೆ ತಾಲೂಕಾ ಘಟಕ ಉದ್ಘಾಟನೆ

ನಾಳೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಾಗಲಕೋಟೆ ತಾಲೂಕಾ ಘಟಕ ಉದ್ಘಾಟನೆ

ಬಾಗಲಕೋಟೆ ಜೂ.15: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಾಗಲಕೋಟೆ ತಾಲೂಕಾ ಘಟಕದ ಉದ್ಘಾಟನಾ ಸಮಾರಂಭ ದಿ. 16 ರಂದು ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ನಗರದ ಬ.ವಿ.ವ. ಸಂಘದ ಮಿನಿ ಸಭಾಭವನದಲ್ಲಿ ಜರುಗಲಿದೆ.

    ಲೋಕೋಪಯೋಗಿ ಇಲಾಖೆಯ ವಿಶ್ರಾಂತ ಪ್ರಧಾನ ಕಾರ್ಯದರ್ಶಿ ಜಿ.ಸಿ. ತಲ್ಲೂರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ವಾಣಿಜ್ಯ ತೆರಿಗೆ ಇಲಾಖೆಯ ವಿಶ್ರಾಂತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ ಅವರು ಉದ್ಘಾಟಿಸುವರು.
    ಮುಖ್ಯ ಅತಿಥಿಗಳಾಗಿ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಜಿ. ಕೋಟಿ, ತಾಲೂಕಾಧ್ಯಕ್ಷೆ ಶ್ರೀಮತಿ ಗೀತಾ ದಾನಶೆಟ್ಟಿ ಉಪಸ್ಥಿತರಿರಲಿದ್ದು ಸರ್ವರಿಗೂ ಸ್ವಾಗತ ಕೋರಲಾಗಿದೆ.

ತಾಲೂಕಾ ಘಟಕದ ಪದಾಧಿಕಾರಿಗಳು
    ಶ್ರೀಮತಿ ಗಿಈತಾ ದಾನಶೆಟ್ಟಿ (ಅಧ್ಯಕ್ಷೆ), ಡಾ. ಕಲ್ಲಯ್ಯ ಹಿರೇಮಠ (ಕಾರ್ಯದರ್ಶಿ), ಡಾ. ಸುಮಂಗಲಾ ಮೇಟಿ (ಸಂಚಾಲಕರು), ಶ್ರೀಮತಿ ನಿರ್ಮಲಾ ಲೂತಿಮಠ , ರಾಜಕುಮಾರ ಕುಲಕರ್ಣಿ, ಶಂಕರ ಕಲ್ಯಾಣಿ, ಶ್ರೀಮತಿ ಈರಮ್ಮ ಹಂಪಿಹೊಳಿ, ಶ್ರೀಮತಿ ರೇಖಾ ಗೋಗಿ, ಶ್ರೀಮತಿ ಶೋಭಾ ಹುಲಗಬಾಳಿ, ಶ್ರೀಮತಿ ಸಿಈಮಾ ಹುಲಿಕಟ್ಟಿ, ರಾಜು ಯಾದವ (ಸದಸ್ಯರುಗಳು).