ಗುರ್ ಬಸಂತ್ ಕೌರ್ ಜತೆ ಹಿಂದು ಸಂಪ್ರದಾಯದಂತೆ ಯುವರಾಜ್ ಸಿಂಗ್ ಮದುವೆ

ಗುರ್ ಬಸಂತ್ ಕೌರ್ ಜತೆ ಹಿಂದು ಸಂಪ್ರದಾಯದಂತೆ ಯುವರಾಜ್ ಸಿಂಗ್ ಮದುವೆ

ನವದೆಹಲಿ: ರೂಪದರ್ಶಿ, ನಟಿ ಹೇಜೆಲ್ ಕೀಚ್ ರನ್ನು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ವಿವಾಹವಾಗಿದ್ದು, ಇದೀಗ ಯುವಿಗಾಗಿ ಹೇಜೆಲ್ ತಮ್ಮ ಹೆಸರನ್ನು ಗುರ್ ಬಸಂತ್ ಕೌರ್ ಎಂದು ಬದಲಿಸಿಕೊಂಡು ಹಿಂದು ಸಂಪ್ರದಾಯದಂತೆ ನಿನ್ನೆ ವಿವಾಹವಾಗಿದ್ದಾರೆ.   ನವೆಂಬರ್ 30 ರಂದು ಸಿಖ್ ಸಂಪ್ರದಾಯದಂತೆ ಯುವರಾಜ್ ಸಿಂಗ್ ವಿವಾಹವಾಗಿದ್ದರು. ಹೇಜೆಲ್ ಕೀಚ್ ಅವರ ತಂದೆ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದು, ತಾಯಿ ಹಿಂದೂ ಧರ್ಮಕ್ಕೆ ಸೇರಿದ್ದರು. ಇದರಿಂದಾಗಿ ಹೇಜೆಲ್ ಕೀಚ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಯುವಿ ಬಹಳ ಗೌರವಿಸುವ ಬಾಬಾ ರಾಮ್ ಸಿಂಗ್ ಸಲಹೆಯಂತೆ ಹೇಜೆಲ್ ಕೀಚ್ ಹೆಸರನ್ನು ಗುರ್ ಬಸಂತ್ ಕೌರ್ ಎಂದು ಬದಲಾಯಿಸಲಾಗಿದೆ.   ಹೇಜೆಲ್ ಕೀಚ್ ತಾಯಿ ಹಿಂದೂ ಧರ್ಮದವರಾಗಿದ್ದರಿಂದ ಹಿಂದು ಸಂಪ್ರದಾಯದಂತೆ ಗೋವಾದಲ್ಲಿ ಮದುವೆ ನಡೆಯಿತು. ಈ ಸಮಾರಂಭಕ್ಕೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಸೀಮಿತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಭಾಗಿಯಾಗಿದ್ದರು.