ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲೇ ನಕಲಿ ವಿ.ಐ.ಪಿ. ಟಿಕೆಟ್

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲೇ ನಕಲಿ ವಿ.ಐ.ಪಿ. ಟಿಕೆಟ್

ತಿರುಪತಿ : ವಿಶ್ವದ ಶ್ರೀಮಂತ ದೇವಾಲಯವಾಗಿರುವ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ಬರುತ್ತಾರೆ. ಸುಪ್ರಭಾತ ಸೇವೆಯನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತರಿಗೆ ನಕಲಿ ಟಿಕೆಟ್ ನೀಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

ವಿ.ಐ.ಪಿ. ದರ್ಶನದ ಟಿಕೆಟ್ ಗಳನ್ನು, ಸಂಸದರು, ಶಾಸಕರು, ಸಚಿವರ ಶಿಫಾರಸು ಪತ್ರಗಳನ್ನು ನಕಲಿಯಾಗಿ ತಯಾರಿಸಿ, ಸಾಮಾನ್ಯ ಭಕ್ತರಿಗೆ 5000 ರೂ.ನಿಂದ 10,000 ರೂ. ವರೆಗೂ ಅಧಿಕಾರಿಯೊಬ್ಬ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ. ಧರ್ಮಯ್ಯ ಎಂಬಾತ ಏಜೆಂಟರ ಮೂಲಕ ಹಣ ಪಡೆದು ನಕಲಿ ವಿ.ಐ.ಪಿ. ಟಿಕೆಟ್ ಗಳನ್ನು ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಕಾರ್ಯಾಚರಣೆ ನಡೆಸಿ, ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಧರ್ಮಯ್ಯ ಪರಾರಿಯಾಗಿದ್ದಾನೆ.