ಒಂದೂವರೆ ಕೋಟಿ ಕಾಣಿಕೆ

ಒಂದೂವರೆ ಕೋಟಿ ಕಾಣಿಕೆ

ಚಾಮರಾಜನಗರ :  ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ವೇಳೆ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕೇವಲ 29 ದಿನಗಳಲ್ಲಿ ಒಂದೂವರೆ ಕೋಟಿ ಮೊತ್ತದ ಕಾಣಿಕೆ ಸಂಗ್ರಹವಾಗಿ ದಾಖಲೆಯಾಗಿದೆ. ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ನಡೆದ ವೇಳೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಬಂದವರು ದೇವಾಲಯದ ಹುಂಡಿಯಲ್ಲಿ ಕಾಣಿಕೆ ಹಾಕಿದ್ದರು. ಮಾ.2ರಂದು ಬೆಳಗ್ಗೆಯಿಂದ ಪೊಲೀಸ್ ಬಂದೋಬಸ್ತ್‍ನಲ್ಲಿ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ಎಣಿಕೆ ಮಾಡಲಾಯಿತು.

1,50,51,720ರೂ. ಸಂಗ್ರಹವಾಗಿ ದಾಖಲೆ ನಿರ್ಮಾಣವಾಗಿದೆ. ಇದರಲ್ಲಿ ನಿಷೇಧಿತ 1000, 500ರೂ.ಗಳ ನೋಟುಗಳ ಸಹ ಸಂಗ್ರಹವಾಗಿವೆ. 1000 ಮುಖಬೆಲೆಯ 35 ಹಾಗೂ 500 ಮುಖಬೆಲೆಯ 233 ನೋಟುಗಳು ಹುಂಡಿಯಲ್ಲಿ ಬಿದ್ದಿವೆ. ನೋಟುಗಳ ಜತೆ 1.3 ಕೆಜಿ ಬೆಳ್ಳಿ ಪದಾರ್ಥಗಳು, 60 ಗ್ರಾಂ ಚಿನ್ನದ ಮಾದರಿ ಪದಾರ್ಥಗಳು ಸಂಗ್ರಹವಾಗಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಬಸವರಾಜ್ ತಿಳಿಸಿದ್ದಾರೆ.