ಗಣೇಶೋತ್ಸವದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿ: ಹೊನಕಟ್ಟಿ

ಗಣೇಶೋತ್ಸವದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿ: ಹೊನಕಟ್ಟಿ

ಬೆಳಗಾವಿ ಆ21 : ಗಣೇಶೋತ್ಸವ ಕಾರ್ಯಕ್ರಮದಲ್ಲಿ ದೇಶಿ ಸಂಸ್ಕøತಿಗೆ ಒತ್ತು ನೀಡುವುದರೊಂದಿಗೆ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಬೇಕೆಂದು ಮಾರಿಹಾಳ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ ಜೋತಿರ್ಲಿಂಗ ಹೊನಕಟ್ಟಿ ಅವರು ಸೂಚನೆ ನೀಡಿದರು.
ಸುಳೇಬಾವಿ ಗ್ರಾಮದಲ್ಲಿ ಗಣೇಶೋತ್ಸವ/ ಭಕ್ರೀದ್ ಹಬ್ಬಗಳ ನಿಮಿತ್ತ ನಡೆದ ಶಾಂತತಾ ಸಭೆಯಲ್ಲಿ ಗಣಪತಿ ಮಂಡಳಗಳ ಪದಾಧಿಕಾರಿಗಳಿಗೆ ಸಲಹೆ- ಸೂಚನೆ ನೀಡುವ ನಿಟ್ಟಿನಲ್ಲಿ ಅವರು ಮಾತನಾಡಿದರು.
ಡಾಲ್ಬಿ ಹಚ್ಚದೆ ಭಜನೆ, ಜನಪದ ಹಾಡುಗಳಿಗೆ ಒತ್ತು ನೀಡಿ ದೇಶಿ ಸಂಸ್ಕøತಿ ಉಳಿಸಿ ಬೆಳೆಸಲು ಯತ್ನಿಸಬೇಕು ಪಿ.ಓ.ಪಿ ಗಣೇಶ ಪ್ರತಿಷ್ಠಾಪಿಸದೇ ಮಣ್ಣಿನ ಗಣಪತಿಗಳಿಗೆ ಆದ್ಯತೆ ನೀಡಬೇಕು. ಮಂಟಪಗಳಿಗೆ ಅನುಮತಿ ಅತ್ಯಗತ್ಯ. ಅಧಿಕೃತವಾಗಿ ವಿದ್ಯುತ್ ಜೋಡಣೆ ಕೈಗೊಳ್ಳಬೇಕು. ಪಟಾಕಿ ಹಚ್ಚಿ ಪರಿಸರ ಕಲುಷಿತವಾಗುವದನ್ನು ತಡೆಯಬೇಕು ಎಂಬಿತ್ಯಾದಿ ಉಪಯುಕ್ತ ಸೂಚನೆಗಳನ್ನು ಹೊನಕಟ್ಟಿ ಅವರು ಸಭೆಯಲ್ಲಿ ನೀಡಿದರು.
ಸಭೆಯಲ್ಲಿ ಮಹಾಲಕ್ಷ್ಮೀ ಕಮೀಟಿ ಅಧ್ಯಕ್ಷ ಹುಂಕರಿ ಪಾಟೀಲ, ನಾನಪ್ಪ ಪಾರ್ವತಿ, ಪಕೀರಪ್ಪ ಕೋಲಕಾರ, ಶೇಖರ ಕುಡಚಿಮಠ ಸೇರಿದಂತೆ ಎಲ್ಲ ಗಣಪತಿ ಮಂಟಪಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಬೀಟ್ ಪೊಲೀಸ್ ಮಹೇಶ ಸ್ವಾಗತಿಸಿದರು.