ಬೇಗಂ ತಲಾಬ ಪ್ರವಾಸಿತಾಣದ ಅಭಿವೃದ್ಧಿಗೆ 11.25ಕೋಟಿ : ಸಚಿವ ಎಂ.ಬಿ.ಪಾಟೀಲ

ಬೇಗಂ ತಲಾಬ ಪ್ರವಾಸಿತಾಣದ ಅಭಿವೃದ್ಧಿಗೆ 11.25ಕೋಟಿ : ಸಚಿವ ಎಂ.ಬಿ.ಪಾಟೀಲ

ವಿಜಯಪುರ,12: ವಿಜಯಪುರ ನಗರದ ಹೊರವಲಯದ ಬೇಗಂ ತಲಾಬ ಕೆರೆಯಅಭಿವೃದ್ಧಿಗೆ ರೂ.11.25ಕೋಟಿಗಳ ಯೋಜನಾ ವರದಿಗೆ ಸೋಮವಾರ ನಡೆದ ಸಂಪುಟಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಎಂದು ಜಲಸಂಪನ್ಮೂಲ ಹಾಗೂ ವಿಜಯಪುರಜಿಲ್ಲೆಉಸ್ತುವಾರಿ ಸಚಿವಡಾ.ಎಂ.ಬಿ.ಪಾಟೀಲ ಹೇಳಿದ್ದಾರೆ. 
ಬೆಂಗಳೂರಿನಿಂದ ಹೇಳಿಕೆ ನೀಡಿರುವಅವರು16ನೇ ಶತಮಾನದಲ್ಲಿ ಮಹಮ್ಮದ ಆದಿಲ್‍ಶಾಹಿ ನಿರ್ಮಿಸಿದ ಐತಿಕಾಸಿಕ ಬೇಗಂ ತಲಾಬ 234 ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆಯಲ್ಲಿನ ಹೂಳು ತೆಗೆದು ಕೃಷ್ಣಾ ನದಿಯಿಂದ ಲಿಂಗದಳ್ಳಿ ಜಾಕವೆಲ್ ಮುಖಾಂತರ ಈ ಕೆರೆಗೆ ನೀರು ತುಂಬಿಸಿದ್ದು, ನಗರ ಹೊಂದಿಕೊಂಡಿರುವ ಈ ಪ್ರದೇಶವನ್ನು ಸಾರ್ವಜನಿಕರಿಗೆ, ವಿಶೇಷವಾಗಿ ವಿಜಯಪುರ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ವಿಹರಿಸಲು ಮತ್ತು ವಿಶ್ರಾಂತಿ ಪಡೆಯಲು ಸೂಕ್ತ ಸಾರ್ವಜನಿಕಉದ್ಯಾನವನಅಲ್ಲದೇ ಮಕ್ಕಳ ಉದ್ಯಾನವನ, ಪುಟ್‍ಪಾತ್, ವಾಕ್‍ವೇ, ಫುಡ್‍ಕೋರ್ಟ, ಕಾರಂಜಿ, ಸೌರವಿದ್ಯುತ್ ಬೀದಿ ದೀಪಗಳು ಹಾಗೂ ಇತರೆ ಸಾರ್ವಜನಿಕ ಮನೋರಂಜನೆ ವ್ಯವಸ್ಥೆಯನ್ನುಅಭಿವೃದ್ಧಿ ಪಡಿಸುವ ವಿವಿಧ ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗುವುದುಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. 
ಬೇಗಂ ತಲಾಬ ಕೆರೆಯನ್ನು ಸಣ್ಣ ನೀರಾವರಿಇಲಾಖೆಯಿಂದ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಪ್ರಸ್ತಾಪಿತಜಲಾಭಿಮುಖಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಮುಂದಿನ ನಿರ್ವಹಣೆಗಾಗಿ ಹಸ್ತಾಂತರಗೊಳಿಸಲು ಸಹ ಸಂಪುಟದಲ್ಲಿಅನುಮೋದನೆ ನೀಡಲಾಗಿದ್ದು, ಕೃಷ್ಣಾ ಭಾಗ್ಯ ಜಲ ನಿಗಮದಿಂದಅಭಿವೃದ್ಧಿಕಾಮಗಾರಿಯನ್ನುಕೂಡಲೇ ಕೈಗೊಳ್ಳಲಾಗುವುದುಎಂದು ಸಚಿವರು ತಿಳಿಸಿದ್ದಾರೆ.