ಬಸ್’ನಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ

ಬಸ್’ನಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ

ಉಡುಪಿ, ಜು.11: ಕೆಎಸ್'ಆರ್'ಟಿಸಿ ಸಿಬ್ಬಂದಿಗಳು ಬಸ್'ನಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಬಾಗಲಕೋಟೆ ಮೂಲದ ಅಪ್ರಾಪ್ತ ಬಾಲಕಿ 15 ದಿನಗಳ ಹಿಂದೆ ಹಾವೇರಿಯ ಹಿರೇಕೆರೂರಿನ ತನ್ನ ಪ್ರಿಯಕರನ ಮನೆಗೆ ತೆರಳಿದ್ದಳು. ಆದರೆ ಆಕೆ ಅಪ್ರಾಪ್ತೆ ಎಂಬ ಒತ್ತಡದಿಂದ ಪ್ರಿಯಕರ ಹಾಗೂ ಆತನ ಕುಟುಂಬ ಆಕೆಯನ್ನು ರಾಣಿಬೆನ್ನೂರಿನಿಂದ ಉಡುಪಿಗೆ ಹೋಗುವ KSRTC ಬಸ್ ಹತ್ತಿಸಿದ್ದ. ಈ ವೇಳೆ ಬಾಲಕಿಯನ್ನು ತಾನು ಉಡುಪಿಗೆ ಬಿಡುವುದಾಗಿ ಪುಸಲಾಯಿಸಿದ್ದಾನೆ. ಆದರೆ ಬಸ್ ಹೊರಟ ಬಳಿಕ ದಾರಿ ಮಧ್ಯೆ ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಒಟ್ಟು 3 ಸಿಬ್ಬಂದಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಈ ಸಂಬಂಧ ಉಡುಪಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನಿರ್ವಾಹಕ ಯುವರಾಜ್ ಕಟ್ಟೆಕಾರ, ಚಾಲಕ ವೀರಯ್ಯ ಹಿರೇಮಠ್ ಹಾಗೂ ಚಾಲಕ ಕಂ ನಿರ್ವಾಹಕ ರಾಘವೇಂದ್ರ ಬಡಿಗೇರ ಅವರನ್ನು ಬಂಧಿಸಿದ್ದಾರೆ.