ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ: ವ್ಯಕ್ತಿ ಬಂಧನ

ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ: ವ್ಯಕ್ತಿ ಬಂಧನ

ಬೆಂಗಳೂರು.12: ಬಾಳೆಹಣ್ಣು, ಕಿತ್ತಳೆ ಆಯ್ತು ಇದೀಗ ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಸಿಲಿಂಡರಿನಲ್ಲಿ ಗಾಂಜಾ ಪ್ಯಾಕ್ ಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇದೀಗ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಈ ಖತರ್ನಾಕ್ ಆರೋಪಿ ಸಿಲಿಂಡರ್ ನ ಕೆಳಭಾಗವನ್ನು ಕತ್ತರಿಸಿ ಅದರೊಳಗಡೆ ಗಾಂಜಾ ಇಟ್ಟು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಿತರಣೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುಮಾರು 576 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇಲ್ಲಿಯವರೆಗೆ ಒಟ್ಟು 318 ಕೇಸ್ ದಾಖಲಾಗಿವೆ. ಅಲ್ಲದೇ ಆರೋಪಿಗಳಿಂದ ಸುಮಾರು 500 ಕೆ.ಜಿ ಗಾಂಜಾ, ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ.

ಕಳೆದ ವರ್ಷ 138 ಕೇಸ್ ಗಳು ದಾಖಲಾಗಿದ್ದು, 305 ಮಂದಿ ಆರೋಪಿಗಳನ್ನು ಬಂಧಿಸಿಲಾಗಿದೆ. ಇನ್ನು ಬಂಧಿತರಿಂದ 275 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂಬುದಾಗಿ ತಿಳಿದುಬಂದಿದೆ.