ಗೌರಿ ಲಂಕೇಶ ಮೇಲೆ ಗುಂಡಿನ ದಾಳಿ

ಗೌರಿ ಲಂಕೇಶ ಮೇಲೆ ಗುಂಡಿನ ದಾಳಿ

ಬೆಂಗಳೂರು,ಸೆ.5: ಹಿರಿಯ ಪತ್ರಕರ್ತೆ ಗೌರಿ ಲಂಕೇಶರವರನ್ನು ಶೂಟೌಟ್ ಮಾಡಿ ಹತ್ಯೆ ಮಾಡಿದ್ದಾರೆ. ರಾಜರಾಜೇಶ್ವರಿ ನಗರದ ಅವರ ಮನೆಯಲ್ಲಿಯೇ ಹತ್ಯೆಗೈದಿದ್ದಾರೆ. 
ವಾಹನದಲ್ಲಿ ಬಂದಿದ್ದ ದುಷ್ಕಮಿಗಳು ಅತಿ ಹತ್ತಿರದಿಂದ ಗುಂಡು ಹಾರಿಸಿ ಕೃತ್ಯ ಎಸಗಿ, ಪರಾರಿಯಾಗಿದ್ದಾರೆ ಎನ್ನಲಾಗಿದೆ. ಒಟ್ಟು 7 ಸುತ್ತು ಗುಂಡು ಹಾರಿಸಿದ್ದು, 4 ಗುಂಡುಗಳು ಗೋಡೆಗೆ ಬಿದ್ದಿವೆ. ಗೌರಿಯವರಿಗೆ 3 ಗುಂಡುಗಳು ತಾಕಿವೆ. ಹಣೆಗೆ ಮತ್ತು ಎದೆಗೆ ಗುಂಡು ತಾಕಿದ್ದರಿಂದ ಸ್ಥಳದಲ್ಲಿಯೇ ಕುಸಿದು ಬಿದ್ದು ಗೌರಿಯವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ.
ಮನೆಯಲ್ಲಿ ಯಾರು ಇರಲಿಲ್ಲ, ಮನೆ ಕೆಲಸದವರು ಇದ್ದರಾ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಾ. ಕೊಲೆಗೈದವರು ಯಾರು ಎಂದು ತಿಳಿದು ಬಂದಿಲ್ಲ. ಗೌರಿಯವರ ಮರಣೋತ್ತರ ಪರಿಕ್ಷೇಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದೇಹವನ್ನು ಕಳುಹಿಸಿದ್ದಾರೆ. ನಾಳೆ ಪೊಲೀಸ್ ವರದಿಯ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ.