ಕೇಂದ್ರದ ಜಿ,ಎಸ್,ಟಿ ವಿರೋದಿಸಿ ಜವಳಿ ನೇಕಾರರಿಂದ ಪ್ರತಿಭಟಣೆ: ಬಂದ್

ಕೇಂದ್ರದ ಜಿ,ಎಸ್,ಟಿ ವಿರೋದಿಸಿ ಜವಳಿ ನೇಕಾರರಿಂದ ಪ್ರತಿಭಟಣೆ: ಬಂದ್

ರಬಕವಿ-ಬನಹಟ್ಟಿ, ,ಜೂ.23: ಶತಮಾನಗಳಿಂದ ಜವಳಿ ನೇಕಾರಿಕೆಗೆ ಪ್ರಸಿದ್ದ ಪಡೆದ ಅವಳಿ ನಗರವು ಕೆಲವು ತಿಂಗಳಹಿಂದೆ ಅಷ್ಟೆ ಭಾರಿ ಪ್ರಮಾಣದಲ್ಲಿ ಉದ್ಯೋಗ ಕುಸಿತಗೊಂಡು ನೇಕಾರಿಕೆ ಉದ್ಯೋಗವು ನಶೀಸಿ ಹೋಗುವಂಥಾ ಪರಿಣಾಮ ಎದುರಾಗಿತ್ತು, ಇಗ ಅಲ್ಪ ಸ್ವಲ್ಪವಾಗಿ ನೇಕಾರಿಕೆಯ ಉದ್ಯೋಗದಲ್ಲಿ ಚೇತರಿಕೆ ಕಾಣುತ್ತಿದ್ದು ಈ ಕೇಂದ್ರ ಸರಕಾರದ ಜಿ,ಎಸ್,ಟಿ ಜಾರಿಗೆಯಿಂದ ನೇಕಾರಿಕೆಯ ಜವಳಿ ಉದ್ಯೋಗಕ್ಕೆ ಭಾರಿ ಹೋರೆಯಾಗಲಿದೆ, ಎಂದು ವಿರೋದಿಸಿ ರಬಕವಿ-ರಾಮಪುರ-ಬನಹಟ್ಟಿ ನೇಕಾರರ ಸಮುಧಾಯ ಮತ್ತು ಮಾಲಿಕರ ಸಂಘಟಣೆಗಳು ನಗರದಲ್ಲಿ ಪ್ರತಿಭಟಣೆ ನಡೆಸಿದರು.

ಈ ಪ್ರತಿಭಟಣೆಗೆ, ರಬಕವಿ-ಬನಹಟ್ಟಿ ನಗರದ ಅಂಗಡಿ ಮಾಲಿಕರು ಸಂಪೂರ್ಣ ವಹಿವಾಟು ಬಂದ ಮಾಡಿ ಸಾವಿರಾರು ನೇಕಾರ  ಜೊತೆಯಲ್ಲಿ ಬೆಂಬಲಿಸಿಕೊಂಡು ಕೇಂದ್ರ ಸರಕಾರವು ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ಜವಳಿ ತಯಾರಿಕೆಗೆ ಈ ತೆರಿಗೆಯನ್ನು ಮುಕ್ತಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಬನಹಟ್ಟಿ ಈಶ್ವರಲಿಂಗ ಮೈದಾನದಲ್ಲಿ ಸಭೆ ನಡೆಸಿ ರಬಕವಿ-ಬನಹಟ್ಟಿ ಪಾವರಲೊಮ್ ಓನರ್ಸ್ ಅಸೋಶಿಯನ್. ಮುಖಂಡರಿಂದ ತೇರದಾಳ ಮತ ಕ್ಷೇತ್ರದ ಉಪ-ತಹಸೀಲ್ದಾರ ಎಸ್.ಬಿ ಕಾಂಬಳೆ. ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ¨ನಹಟ್ಟಿ ಪೋಲಿಸ್ ಠಾಣೆಯ ಸಿಬ್ಬಂದಿ ಜೊತೆ ಸಿ.ಪಿ.ಆಯ್ ಬಿ.ಎಸ್ ಮಂಟೂರ್. ತೇರದಾಳ ಕಂಧಾಯ ನೀರಿಕ್ಷಕರಾದ ಎಸ್.ಬಿ.ಮಾಯನ್ನವರ್. ಪಿ.ಎಸ್ ವಂದಾಲ್. ಹಾಜರಿದ್ದರು.