ಇಲಕಲ್ಲ ಡಯಟ್‍ನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ

ಇಲಕಲ್ಲ ಡಯಟ್‍ನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ

ಬಾಗಲಕೋಟೆ, ಡಿ.1 : ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಪಡೆಯದೇ ಇರುವ ಶಿಕ್ಷಕರಿಗೆ ಎನ್.ಆಯ್.ಒ.ಎಸ್ ಮೂಲಕ ಸದರಿ ತರಬೇತಿಗಾಗಿ ಡಯಟ್ ಇಲಕಲ್ಲದಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗಿದೆ. ಸದರಿ ತರಬೇತಿಯ ಮಾರ್ಗದರ್ಶನ ಹಾಗೂ ಅಧ್ಯಯನ ಸಾಮಗ್ರಿ ಮತ್ತು ತರಬೇತಿಯ ಹೆಚ್ಚಿನ ಮಾಹಿತಿಯನ್ನು ಡಯಟ್ ಇಲಕಲ್ಲಿನ ಪ್ರಾಚಾರ್ಯರು (ಮೊನಂ.9448999356) ನೋಡಲ್ ಅಧಿಕಾರಿ (9448002601)ಗಳನ್ನು ಸಂಪರ್ಕಿಸಬಹುದಾಗಿದೆ.